ಹೀಗೊಂದು ಬುಲ್ಲೆಟ್ ಕಥನ
ಐದನೇ ಕ್ಲಾಸಿನಲ್ಲಿ ಪೋಲೀಸ್ ಇನ್ಸ್ಪೆಕ್ಟರ್ ರ ಬುಲೆಟ್ ಕಂಡು ಮನಸೋತ ನಾನು ಮುಂದೊಂದು ದಿನ ಇದನ್ನು ನಾನು ಗಳಿಸಿದ ಹಣದಲ್ಲೇ ಖರೀದಿಸಬೇಕೆಂದು ನಿಶ್ಚಯಿಸಿಯಗಿತ್ತು. ಹರಯದಲ್ಲಿ ಹುಡುಗಿಯರ ಮೋಹಕಿಂತ ಬುಲ್ಲೆಟ್ ಎಂಜನಿನ್ನ ಲಯಭದ್ದ ಶಬ್ದಕ್ಕೆ ಮಾರುಹೋದ ನಿದರ್ಶನಗಳೇ ಹೆಚ್ಚು.
ತೇಜಸ್ವಿಯವರ "ಅಣ್ಣನ ನೆನಪು" ಕಾದಂಬರಿಯಲ್ಲಿ ಚಿತ್ರಿತವಾಗಿರುವ ಅವರ ಮತ್ತು ಅವರ ಸ್ಕೂಟರನ ರೋಚಕ ಪ್ರಸಂಗಗಳು ನನ್ನನು ತೀವ್ರತರವಾಗಿ ಕಾಡಿದ್ದವು, ಅವರಂತೆ ನಾನೂ ಬೈಕ್ ನ ಹಿಂಬದಿಯ ಸೀಟಿನ್ನು ತೆಗಿಸಬೇಕೆಂದುಕೊಂಡಿದ್ದೇನು. ಭೀಮಸೇನ್ ಜೋಶಿಯವರ ಕಾರ್ ಪ್ರೀತಿಯ ಬಗ್ಗೆ ಓದಿದಾಗಲೂ ನನ್ನ ಕಲ್ಪನೆಗೆ ಮಾತ್ರ ಸೀಮಿತವಾದ ಬುಲ್ಲೆಟ್ ಅನ್ನು ಅಷ್ಟೇ ಪ್ರೀತಿಯಿಂದ ಆರೈಕೆ ಮಾಡುವ ಬಯಕೆ.
ಈ ಹಗಲುಗನಸುಗಳಿಗೆ ಕಡಿವಾಣ ಬೀಳುತಲಿದಿದ್ದು ಮಾತ್ರ ನನ್ನ ಹಳೆಯ ಸ್ಪ್ಲೆಂಡರ್ ನ ಪೆಟ್ರೋಲ್ ಬರಿದಾದಗ😅. ಅಪ್ಪನ ಹತ್ತಿರ ಇಂಧನಕ್ಕೆ ಹೆಚ್ಚಿನ ಹಣ ಕೇಳಲು ಸ್ವಾಭಿಮಾನದ ಮನಸ್ಸು ಒಪ್ಪದೆ ತುಮಕೂರಿನ ಬೀದಿಗಳಲ್ಲಿ ಬೈಕ್ ತಳ್ಳುವಾಗ ಬುಲ್ಲೆಟ್ನ್ ಆಸೆ ಗಗನ ಕುಸುಮವಾಗಿ ತೋರದಿದ್ದರು ಹೆಗಲ ಹೊರೆ ಅನ್ನಿಸಿದಂತು ನಿಜ... ಇಂತಹ ಸಮಯದಲ್ಲಿ Gully Boy ಚಿತ್ರದ "ಅಪ್ನ ಟೈಮ್ ಆಯೆಗ" ರೀತಿಯಲ್ಲಿ ಸಂತೈಸಿಕೂಂಡದ್ದು ಈಗ ಮಧುರ ನೆನಪುಗಳು.
"ರಾಜಿ"ಯ ಪರಿಕಲ್ಪನೆ ಇಲ್ಲದ ನಾನು ;ಅತ್ತ ಇಷ್ಟವಿಲ್ಲದ ಕೆಲಸಕ್ಕೆ ರಾಜಿಯಗದೆ , ಇತ್ತ ಪ್ರೀತಿಯ ಬೈಕನ್ನು ಕೊಳ್ಳಲ್ಲಾಗದೆ ಅನುಭವಿಸಿದ ಚಡಪಡಿಕೆಗಳು ಹೇಳತೀರದು. ವೃತ್ತಿಯ ದಿಸೆಯನ್ನು ಬದಲಾಯಿಸಿ ; ಐದನೇ ಕ್ಲಾಸಿನಲ್ಲಿ ಕಂಡ ಕನಸನ್ನು ನನಸಾಗಿಸಲು ಹಿಡಿದ ಸಮಯ ಬರೋಬ್ಬರಿ 17 ಸಂವತ್ಸರಗಳು.
"ತುಪಾಕಿ " ಎಂದು ನಾಮಾಂಕಿತಗೊಂಡ ಬೈಕಿನಲ್ಲಿ ಉತ್ತರಾಖಂಡದ ಕಣಿವೆಗಳು ,ದೆಹಲಿಯ ಗಲ್ಲಿಗಳು ,ಕರ್ನಾಟಕದ ಕರವಾಳಿ ತೀರ, ಪಶ್ಚಿಮ ಘಟ್ಟಗಳನ್ನು ಸುತಿದ ಅವಿಸ್ಮರಣೀಯ ಹಾಗೂ ಸಂಬೃದ್ದ ಅನುಭವಗಳು ನನ್ನವು ...
ಬೀದಿ ಬದಿಯಲ್ಲಿ ನಿಂತು ಚಹಾ ಸವಿಯುತ್ತಿದ್ದ ಸಮಯದಲ್ಲಿ ಬಂದು ಕುತೂಹಲ ಪೂರ್ವಕವಾಗಿ ನನ್ನ ಬೈಕ್ ಅನ್ನು ಪರಿಶೀಲಿಸಿ "ಅಣ್ಣ ಈ ಬೈಕ್ ತಗೊಳಕ್ ಎಷ್ಟ್ ದುಡ್ಡು ಬೇಕು? ಏನ್ ಮಾಡ್ಬೇಕು? " ಯಂದು ಕೇಳಿದ ಆ ಹುಡುಗನ ಪ್ರಶ್ನೆಯೇ ಈ ಲೇಖನದ ಪ್ರೇರಣೆ.
ಹುಬ್ಬಳ್ಳಿ ಕಡೆ ಹೊರಟ ನನ್ನ ಮನಸಿನಲ್ಲಿ
" ಆ ಹುಡುಗ ಮುಂದೆ ಯಾವತ್ತಾದರೂ ಬುಲ್ಲೆಟ್ ತಗೊಳೂ ಸ್ಥಿತಿಗೆ ತಲುಪುತ್ತಾನ ? "
"ಆ ಪೋಲೀಸ್ ಇನ್ಸ್ಪೆಕ್ಟರ್ ಇವಗ್ ಏನ್ ಮಾಡ್ತೀರಬೋದು ?"
"ಆಸೆ ನಿಜವಾಗಿಯೂ ದುಃಖಕ್ಕೆ ಕಾರಣವಾ ? "
" ರಾಜಿಯ ಔಚಿತ್ಯ ಏನು ? "
ಯಂಬೆಲ್ಲ ಪ್ರಶ್ನೆಗಳು ಮೂಡತೊಡಗಿದವು..........

ಚೆನ್ನಾಗಿದೆ...
ReplyDeleteಧನ್ಯವಾದಗಳು ಶ್ರೀಕಾಂತ್ 🙂
DeleteThanks le pa
ReplyDeleteReally nice and simple 👍
ReplyDeleteThank you
DeleteSir ji super 😍😍
ReplyDeleteSuperb read..kudos!
ReplyDelete